ರಾಜೀವನಗರ : ದಿನಾಂಕ 21.02.2024 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಮ್ಮ ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳ ಮನೆ ಬೇಟಿ ಮಾಡಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು 10ನೇ ತರಗತಿ ವಿದ್ಯಾರ್ಥಿಗಳಿಗೆ how to face exam? ಎಂಬ ಬಗ್ಗೆ ವಿಷಯವಾರು ಮಾತನಹಿತಿ ನೀಡಿ ಪ್ರೇರಣೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಜೊತೆಗಿದ್ದು ಸಹಕರಿಸಿದರು.
ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ| ಎಲ್ಲಮ್ಮ ರವರು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇಲ್ಲಿ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಮನೆಗೆ ಶಿಕ್ಷಕ ಮುಖ್ಯ ಶಿಕ್ಷಕರ ಜೊತೆಯಲ್ಲಿ ಹೋಗಿ ಪರೀಕ್ಷಾ ತಯಾರಿಯ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಅಭ್ಯಾಸದ ಕುರಿತು ಮಾಹಿತಿ ನೀಡಿದರು.






No comments:
Post a Comment